ರಾಷ್ಟ್ರಧ್ವಜವು ಖಾದಿ ಬಟ್ಟೆಯದ್ದೇ ಆಗಿರಬೇಕು ಎಂಬ ಮಹತ್ವದ ನಿರ್ಧಾರವನ್ನು ನಮ್ಮ ಪೂರ್ವಿಕರು ತೆಗೆದುಕೊಂಡಿದ್ದರು. ಏಕೆ ಹೀಗೆ ಮಾಡಿದ್ದರೆಂದರೆ, ಖಾದಿ ನೂಲುವವರು, ಕೈ ಉತ್ಪಾದಕ ಬಡವರು, ಹಾಗೂ ಸಣ್ಣ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಹಿತ ಅಡಗಿತ್ತು ನಮ್ಮ ಈ ನಿರ್ಧಾರದ ಹಿಂದೆ. ದೇಶವನ್ನು ಪವಿತ್ರ ಆರ್ಥಿಕತೆ ಮುನ್ನಡೆಸಲಿ ಎಂಬ ಮಹಾನ್ ಉದ್ದೇಶವಿತ್ತು, ನಮ್ಮ ನಿರ್ಧಾರದ ಹಿಂದೆ. ಆದರೆ ನಾವೀಗ ಉದ್ದೇಶ ಮರೆತಿದ್ದೇವೆ. ಪ್ಲಾಸ್ಟಿಕ್ಕಿನ ಧ್ವಜ ಹಾರಿಸುತ್ತಿದ್ದೇವೆ. ಮಾತ್ರವಲ್ಲ, ವಿದೇಶದಿಂದಾಮದಾದ ಬಟ್ಟೆಯಿಂದಲೂ ಧ್ವಜವನ್ನು ಉತ್ಪಾದಿಸಬಹುದು ಎಂದು ಧ್ವಜನಿಯಮವನ್ನೇ ಸಡಿಲಿಸಿದ್ದೇವೆ. ಪವಿತ್ರ ಆರ್ಥಿಕತೆಯನ್ನು ಕಡೆಗಣಿಸಿ ಎಲ್ಲೆಲ್ಲೂ ರಾಕ್ಷಸ ಆರ್ಥಿಕತೆಯನ್ನೇ ಮೆರೆಯುತ್ತಿದ್ದೇವೆ.
Flag Satyagraha / ಧ್ವಜ ಸತ್ಯಾಗ್ರಹ
